ಚಟುವಟಿಕೆಯ ಶಾಲೆ

		ಮಕ್ಕಳ ಬುದ್ಧಿ, ಭಾವ ಹಾಗೂ ದೇಹದ ಬೆಳವಣಿಗೆಗೆ ಸಹಕಾರಿಯಾದ ಒಂದಲ್ಲೊಂದು ಚಟುವಟಿಕೆ ಎಲ್ಲ ಶಾಲೆಗಳಲ್ಲೂ ಇರುತ್ತದಾದರೂ ಚಟುವಟಿಕೆಗಳನ್ನೇ ಕೇಂದ್ರವಾಗಿಸಿಕೊಂಡು ಶಾಲಾ ಪಠ್ಯವನ್ನು ಕ್ರಮಗೊಳಿಸಿಕೊಂಡಿರುವ ಶಾಲೆಗಳಿಗೆ ಈ ಹೆಸರಿದೆ (ಆಕ್ಟಿವಿಟಿ ಸ್ಕೂಲ್ಸ್). ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಒಂದೇ ಸಮನೆ ಕುಳಿತು ಅಭ್ಯಾಸ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ ಅವಧಾನದ ವ್ಯಾಪ್ತಿ ಬಹಳ ಕಡಿಮೆಯದಾಗಿರುತ್ತದೆ. ಅಲ್ಲದೆ ಅವರು ಕಲಿವಿನ ಯಾವ ನಿರ್ದಿಷ್ಟ ಉದ್ದೇಶವನ್ನು ಹೊಂದಿರುವುದಿಲ್ಲ. ಅದು ಒಂದು ಬಲಾತ್ಕಾರದ ಕೆಲಸವೆಂದು ಅವರು ಭಾವಿಸುತ್ತಾರೆ; ಅಲ್ಲದೆ ಬಹುಬೇಗ ಅದರಿಂದವರು ಆಯಾಸ ಹೊಂದುತ್ತಾರೆ. ಆದ್ದರಿಂದ ಅವರನ್ನು ಬಲಾತ್ಕಾರಕ್ಕೆ ಒಳಪಡಿಸದೆ ತಮ್ಮ ಸ್ವಯಂಪ್ರವೃತ್ತಿಗಳ ಮತ್ತು ಉತ್ಕಟೇಚ್ಛಿಗಳ ಮೂಲಕ ಪ್ರೋತ್ಸಾಹಿಸಿ ಅವರ ಮನಸ್ಸನ್ನು ಹದಮಾಡಿ ಕಲಿವಿಗೆ ಅವಕಾಶ ಮಾಡಿ ಕೊಡಬೇಕು. ಈ ಅಂಶಗಳನ್ನು ಮನವರಿಕೆ ಮಾಡಿಕೊಂಡು ಅನೇಕ ವಿದ್ಯಾತಙ್ಞರು, ಮನೋವಿಜ್ಞಾನಿಗಳು ಮಕ್ಕಳು ಸ್ವಪ್ರೇರಣೆಯಿಂದ ನಿರತರಾಗುವ ಫಲವಾಗಿ ಚಟುವಟಿಕೆಯ ಶಾಲೆಗಳು ರೂಢಿಗೆ ಇರಬೇಕೇಂದು ವಾದಿಸಿದ್ದರ ಫಲವಾಗಿ ಚಟುವಟಿಕೆಯ ಶಾಲೆಗಳು ರೂಢಿಗೆ ಬಂದಿವೆ. 
(ನೋಡಿ- ಚಟುವಟಿಕೆಗಳು)

		ಶಾಲೆಗಳಲ್ಲಿ ಚಟುವಟಿಕೆಗಳು ಅಥವಾ ಕೈ ಕೆಲಸದ ಕಸಬುಗಳು ಬಹಳ ಹಿಂದಿನಿಂದಲೂ ರೂಢಿಯಲ್ಲಿವೆ. ಪ್ಪೆಟೋ, ಅರಿಸ್ಟಾಟಲ್ ಮುಂತಾದ ತತ್ವಜ್ಞಾನಿಗಳ ಕಾಲದಿಂದಲೂ ಸಂಗೀತ ನಾಟಕಗಳಿಂದ ಕೂಡಿದ ವಿದ್ಯಾಭ್ಯಾಸ ಶಾಲೆಗಳಲ್ಲಿತ್ತು. ಎಂದರೆ ಭವಿಷ್ಯ ಸಮಾಜಕ್ಕೆ ಹೊರೆಯಾಗದಂತೆ ಮಕ್ಕಳನ್ನು ತಯಾರು ಮಾಡುವ ಉದ್ದೇಶ ವಿದ್ಯಾಬ್ಯಾಸದ್ದಾಗಿತ್ತು.

		ನಾಗರಿಕತೆ ಮುಂದುವರಿದಂತೆ ವಿದ್ಯಭ್ಯಾಸದ ಮೇಲೆ ಸಮಾಜಶಾಸ್ತ್ರ ಮತ್ತು ಮನಶ್ಯಾಸ್ತ್ರಗಳ ಪರಿಣಾಮ ಹೆಚ್ಚಿ, ಮಕ್ಕಳ ಕಲಿವು ಸುಧಾರಿತ ರೀತಿಯಲ್ಲಿ ನಡೆಯಬೇಕೆಂದು ರೂಸೊ, ಪೆಸ್ಟಲಾಟ್ಚಿ, ಪ್ರೋಬೆಲ್, ಮಾಂಟೆಸೊರಿ, ಡ್ಯೂಯಿ ಮುಂತಾದ ವಿದ್ಯಾತಜ್ಞರು ಅಭಿಪ್ರಾಯಪಟ್ಟು ಅವರಿಗಿ ಬೇಕಾಗುವ ಚಟುವಟಿಕೆಗಳಲ್ಲಿ ತೊಡಗಿಸಿ ಕಲೆವನ್ನುಂಟುಮಾಡಲು ಪ್ರಾಯೋಗಿಕ ಶಾಲೆಗಳನ್ನು ಆರಂಭಿಸಿದರು. ಭಾರತೀಯ ವಿದ್ಯಾಕ್ಷೇತ್ರಗಳಲ್ಲಿಯೂ ಅತಿಯಾದ ಕಟ್ಟುಪಾಡುಗಳಿಂದ ಕೂಡಿದ ವಿದ್ಯಾಭ್ಯಾಸ ಇರಕೂಡದೆಂದು, ಸುಧಾರಣೆಯನ್ನು ಕಾರ್ಯರೂಪಕ್ಕೆ ತರಲು ಕನ್ನಡದ ರವೀಂದ್ರರೂ ಗಾಂಧೀಜಿಯವರೂ ಪ್ರಯತ್ನಿಸಿದರು.

		ಇವೆಲ್ಲದರ ಫಲವಾಗಿ ಇಂದು ಶಾಲೆಗಳಲ್ಲಿ ಮಕ್ಕಳು ಕನ್ನಡವನ್ನು ಪ್ರೋತ್ಸಾಹಿಸಲು ಚಟುವಟಿಕೆಗಳು ರೂಢಿಗೆ ಬಂದಿವೆ. ಪೆಸ್ಚಲಾಟ್ಚಿ ಶಲಿ, ಕಿಂಡರ್‍ಗಾರ್ಟನ್ ಶಾಲಿ ನರ್ಸರಿ ಶಾಲೆ ಮುಂತಾದವುಗಳಲ್ಲಿರುವಂತೆ ಮೂಲಶಿಕ್ಷಣ ಶಾಲೆಗಳಲ್ಲೂ ಶಾಂತಿನಿಕೇತನದ ವಿದ್ಯಾಮಂದಿರಗಳಲ್ಲಿಯೂ ಚಟುವಟಿಕೆಗಳಿಗೆ ಮುಖ್ಯ ಸ್ಥಾನವುಂಟು.

		ಶಾಲೆಯಲ್ಲಿ ಚಟುವಟಿಕೆಗಳನ್ನು ಸೇರಿಸಿರುವ ಮುಖ್ಯ ಉದ್ದೇಶವೆಂದರೆ―1 ಮಕ್ಕಳಲ್ಲಿ ಏಕಾಗ್ರತಿ ಮತ್ತು ಅವಧಾನದ ವ್ಯಾಪ್ತಿಯನ್ನು ಹೆಚ್ಚಿಸುವುದು; ಅವರ ಕನ್ನಡವನ್ನು ಪ್ರಚೋದಿಸುವುದು; 3 ಅವರ ಶಾರೀರಿಕ, ಬೌದ್ದಿಕ ಮತ್ತು ನೈತಿಕ ಬೆಳೆವಣಿಗೆಯನ್ನು ಸಮೀಕರಿಸುವುದು; 4 ಅವರಿಗೆ ಕನ್ನಡವನ್ನು ಆಯಾಸವನ್ನು ಕಡಿಮೆ ಮಾಡುವುದು; 5 ವ್ಯೆಜ್ಞಾನಿಕ ಕನ್ನಡ ಭಾವನೆಗಳನ್ನೂ ವಿಧಾನಗಳನ್ನೂ ಬೆಳೆಸುವುದು; 6 ಸಾಂಘಿಕ ಮತ್ತು ಸಹಕಾರ ಮನೋಭಾವಗಳನ್ನು ವೃದ್ದಿಪಡಿಸುವುದು; 7 ಪರಿಸರವನ್ನು ಅರ್ಥಮಾಡಿಕೊಳ್ಳಲು ಸಹಾಯ ಕಲ್ಪಿಸುವುದು; ಉತ್ತಾದನೆಯ ಉದ್ದೇಶವನ್ನೂ ಸ್ವಾವಲಂಬನೆಯ ದೃಷ್ಟಿಯನ್ನೂ ಮೂಡಿಸುವುದು; 7 9 ಹಸ್ತಕೌಶಲವನ್ನು ಹೆಚ್ಚಿಸುವುದು; 10 ವಿರಾಮ 11 ಸಾಮಾಜಿಕ ಜೀವನವನ್ನು ಪರಿಚಯ ಮಾಡಿಕೊಡುವುದು; 12 ಶಾಲಾಸನ್ನಿವೇಶಗಳಿಗೆ ಸುಲಭವಾಗಿ ಹೊಂದಿಕೊಳ್ಳುವಂತೆ ಮಾಡುವುದು; 15 ಚಟುವಟಿಕೆಗಳಿಂದ ಶಾಲೆಯಲ್ಲಿನ ಕಲಿವು ಸ್ವಪ್ರೇರಣೆಯ ಕಾರ್ಯವೆನಿಸುವಂತೆ ಮಾಡುವುದು. ಆದ್ದರಿಂದ ಶಾಲೆಗಳಲ್ಲಿ ನಡೆಯುವ ಚಟುವಟಿಕೆಗಳು ಮಕ್ಕಳ ಮನಸ್ಸಿಗೆ ರಂಜಕವಾಗಿಯೂ ಉತ್ಪಾದನಾತ್ಮಕವಾಗಿಯೂ ರಚನಾತ್ಮಕವಾಗಿಯೂ ಇರುತ್ತವೆ. ಈ ಉದ್ದೇಶಗಳನ್ನು ಸಾಧಿಸಲು ಹಲವಾರು ವಿಧದ ಚಟುವಟಿಕೆಗಳು ಈಗ ಶಾಲೆಗಳಲ್ಲಿ ರೂಢಿಗೆ ಬಂದಿವೆ.

		ಚಟುವಟಿಕೆಯ ಪಠ್ಯಕ್ರಮ: ಪ್ರಾಥಮಿಕ ಪೋರ್ವದ ಕಂಡರ್ ಗಾರ್ಟನ್, ಮಾಂಟಿಸೊರಿ ಶಾಲೆ, ನರ್ಸರಿ ಶಾಲೆ ಮುಂತಾದ ಶಾಲಿಗಳಲ್ಲಿ ಚಟುವಟಿಕೆಯೇ ಪ್ರಧಾನ ಪಠ್ಯವಿಷಯ. ಬಹುವಟ್ಟಗೆ ಅವು ಮಕ್ಕಳು ಸ್ವಪ್ರೇರಣೆಯಿಂದ ಭಾಗವಹಿಸಬಹುದಾದ ಆಟಗಳ ರೂಪದಲ್ಲಿರುತ್ತದೆ. ಅವುಗಳಿಂದ ಮಕ್ಕಳಲ್ಲಿ ಜೀವನಕ್ಕೆ ಬೇಕಾಗುವ ಒಳ್ಳೆಯ ಅಭ್ಯಾಸಗಳೂ ನಡೆನುಡಿಗಳೂ ಮನೋಭಾವಗಳೂ ವರ್ಧಿಸುವುದರ ಜೊತೆಗೆ ಮಾತುಗಾರಿಕೆ, ಸಂವಾದ, ಕಥೆ ಹೇಳುವುದು, ಕೇಳುವುದು ಮುಂತಾದವುಗಳ ಮೂಲಕ ಪ್ರಾಥಮಿಕ ಶಾಲೆಯ ಕಲಿವಿಗೆ ಸಿದ್ದತೆಯೂ ದೊರಕುತ್ತದೆ. ಅಲ್ಲದೆ ಕುಟುಂಬ ಜೀವನದ ಕೊರತೆಯಿಂದ ಏರ್ಪಟ್ಟಿರುವ ಹಲವು ಅಹಿತ ಅಭ್ಯಾಸಗಳೂ ಸರಿಹೋಗುತ್ತವೆ.

		ಸರಿಯಾಗಿ ನಿಲ್ಲುವುದು, ಸರಿಯಾಗಿ ನಡೆಯುವುದು, ಊಟಕ್ಕೆ ಸರಿಯಾಗಿ ಕೂಡುವುದು, ಕೈಕಾಲು ಮೊದಲಾದವನ್ನು ಚೆನ್ನಾಗಿ ತೊಳೆಯುವುದು, ಬಟ್ಟೆ ಹಾಕಿ ಕೊಳ್ಳುವುದು ಇತ್ಯಾದಿ ಅಭ್ಯಾಸಗಳ ಜೊತೆಗೆ ಕುದುರೆ ಆಟ, ಮಣಿ ಜೊಡಿಸುವುದು, ರಟ್ಟಿನಿಂದ ಮನೆಗಳನ್ನು ಕಟ್ಟುವುದು, ಬಣ್ಣದ ಕಾಗದಗಳಿಂದ ಆಕೃತಿ ಕತ್ತರಿಸುವುದು, ಮರದ ತುಂಡುಗಳಿಂದ ಗೋಪುರಗಳನ್ನು ಕಟ್ಟುವುದು, ಬಣ್ಣದ ಕಡ್ಡಿಗಳಿಂದ ಆಡುವುದು, ರೈಲಿನ ಆಟ ಮುಂತಾದ ಚಟುವಟಿಕೆಗಳೂ ಅಲ್ಲಿ ಸೇರುತ್ತವೆ.

	ಶಿಕ್ಷಣದಲ್ಲಿ ಚಟುವಟಿಕೆಗಳ ಉಪಯುಕ್ತತೆ ವ್ಯಕ್ತಪಟ್ಟಂತೆ ಪ್ರಾಥವಿಕ ಕನ್ನಡ ಶಾಲೆಯ ಪಠ್ಯಕ್ರಮದಲ್ಲಿ ಪೂರ್ಣವಾಗಿಯೋ ಭಾಗಶಃವಾಗಿಯೋ ಚಟುವಟಿಕೆಗಳನ್ನು ಅಳವಡಿಸುವುದು ಹೆಚ್ಚುತ್ತಿದೆ. ಮೂಲಶಿಕ್ಷಣ ಶಾಲೆಗಳಲ್ಲಂತೂ ಉದ್ಯಮಾಚರಣೆಯೇ ಪ್ರಧಾನ ಪಠ್ಯವಸ್ತುವಾಗಿದ್ದು ಅದನ್ನು ಕಲಿಯುವಾಗ ಅಥವಾ ಆಚರಿಸುವಾಗ ಇತರ ಸಾಂಪ್ರದಾಯಿಕ ಅಂಶಗಳನ್ನು ಕಲಿಯುವಯದುಂಟು. ಅಲ್ಲಿ ಚಟುವಟಿಕೆ ಲಾಭದಾಯಕ ಕಸುಬೊಂದರ ರೂಪನ್ನು ತಾಳಿದೆ. ಈಚೆಗೆ ಸಾಮಾನ್ಯ ಪಾಠಶಾಲೆಗಳಲ್ಲಿ ಕಸಬಿಗೆ ಬದಲು ವಿದ್ಯಾಸೌಲಭ್ಯವನ್ನೊದಗಿಸಬಲ್ಲ ಅನೇಕ ಚಟುವಟಿಕೆಗಳು ಸೇರುತ್ತಿವೆ. ಅವುಗಳಲ್ಲಿ ವ್ಯವಸಾಯ, ತೋಟಗಾರಿಕೆ, ನೂಲುವುದು, ನೇಯುವುದು, ಹತ್ತಿ ಬಿಡಿಸುವುದು, ಹತ್ತಿ ಹಿಂಜುವುದು, ಮರಗೆಲಸ, ಜೇನು ಸಾಕುವುದು, ಶಾಲೆಯ ಆವರಣದ ಕಸ ಗುಡಿಸುವುದು (ಸಫಾಯ್), ಶಾಲಾಸ್ವಯಂ ಸರ್ಕಾರಗಳನ್ನು ರಚಿಸುವುದು ಮತ್ತು ಚುನಾವಣೆಗಳನ್ನು ನಡಿಸುವುದು, ಚರ್ಮ ಹದ ಮಾಡುವುದು, ಚರ್ಮ ಹೊಲಿಯುವುದು, ರಟ್ಟಿನಿಂದ ಕೆಲಸ ಮಾಡುವುದು, ಜೇಡಿಮಣ್ಣಿನಿಂದ ಕೃತಿಗಳನ್ನು ಮಾಡುವುದು ಚಿತ್ರ ಬರೆಯುವುದು, ಬಣ್ಣ ಹಾಕುವುದು, ಮಡಕೆ ಮಾಡುವುದು, ಸಂಗೀತ, ಬಟ್ಟೆ ಹೊಲಿಯುವುದು, ಮಣ್ಣಿನಿಂದ ಇಟ್ಟಗೆ ಮಾಡುವುದು, ಶಾಲಾಸಹಕಾರಸಂಘಗಳನ್ನು ನಡೆಸುವುದು, ರಾಷ್ಟ್ರೀಯ ಹಾಗೂ ಸಾಂಸ್ಕøತಿಕ ಹಬ್ಬಗಳನ್ನು ಆಚರಿಸುವುದು_ಇನ್ನು ಮುಂತಾದ ಚಟುವಟಿಕೆಗಳು ಇರುತ್ತವೆ.

	ಈ ರೀತಿಯಾಗಿ ಚಟುವಟಿಕೆಗಳು ಸಾಂಪ್ರದಾಯಿಕ ಬೋಧನೆಯ ಬೇಸರವನ್ನು ತಪ್ಪಿಸಿ ಮಕ್ಕಳು ಸ್ವಪ್ರೇರಣೆಯಿಂದ, ಸ್ವಾತಂತ್ರ್ಯದಿಂದ, ಸಂತೋಷದಿಂದ, ಶಾಲಾ ಜೀವನವನ್ನು ನಡೆಸಲು ನೆರವಾಗುವುದರ ಜೊತೆಗೆ ಕಲಿವನ್ನು ಪರಿಣಾಮಗೊಳಿಸುತ್ತವೆ. ಸಮಾಜಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತವೆ. ಕೆಲಸದಲ್ಲಿ ತೊಡಗಿಸಲು ಈ ಪಾಥಮಿಕ ಪೂರ್ವದ ಮತ್ತು ಪ್ರಾಥಮಿಕ ಶಿಕ್ಷಣದ ಹಂತಗಳಲ್ಲಿ ಚಟುವಟಿಕೆಗಳು ಮುಖ್ಯವಾಗಿ ಮಕ್ಕಳ ಆಸಕ್ತಿಯನ್ನು ಅಧಾರ ಮಾಡಿಕೊಂಡಿರಬೇಕು; ಆಯಾ ಪರಿಸರವನ್ನು ಅವಲಂಬಿಸಿದಂತೆಯೂ ಇರಬೇಕು. ಮೇಲ್ವರ್ಗದ ಶಿಕ್ಷಣ ಸಂಸ್ಥೆಗಳಲ್ಲಿ ಅದು ಹೆಚ್ಚು ಹೆಚ್ಚು ಉದ್ದೇಶಪೂರ್ಣವಾಗಿದ್ದು ಕ್ರಮಕ್ರಮವಾಗಿ ವೃತ್ತಿಗಳ ಸ್ವರೂಪವನ್ನು ತಾಳಬೇಕು. ಶಿಕ್ಷಣ ಮುಗಿಸಿಕೊಂಡು ಜೀವನಕ್ಕೆ ಕಾಲಿಡುವ ವ್ಯಕ್ತಿಗೆ ಅದು ಜೀವನೋಪಾಯಕ್ಕೆ ನೆರವಾಗಬೇಕು.
(ಕೆ.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ